Khodanapur Explained

Khodanapur
Settlement Type:Village
Pushpin Label Position:right
Pushpin Map Caption:Location in Karnataka, India
Subdivision Type:Country
Subdivision Name: India
Subdivision Type1:State
Subdivision Name1:Karnataka
Subdivision Type2:District
Subdivision Name2:Belgaum
Unit Pref:Metric
Population As Of:2001
Population Density Km2:auto
Demographics Type1:Languages
Demographics1 Title1:Official
Demographics1 Info1:Kannada
Timezone1:IST
Utc Offset1:+5:30

Khodanapur is a village in Belgaum district in Karnataka, India.[1]

Khodanapur village of Kittur taluk has an ancient history and was a rich area like Vijayanagara empire where pearls, diamonds and turquoises were measured and sold in shares, even today gold idols, ornaments, copper-silver-gold coins are available here to many people.This is also evidenced by the popular story of the people here that it was destroyed due to its richness. It was a market for many towns around and today's new town is no exception.The people who migrated and settled in the town after many years and the present town is the burial place of the old town, the trace of the old town to the original generation of the present people shows that they did not know when they settled.If these people knew about the old town or about their cemetery, they would not have usually stayed there. The houses built in the old town have been completely destroyed as they were mud houses and bricks were not used for construction.There are traces of a watch tower and a fort around the town. Coins found here do not have any language script and no traces of any king's rule. This is a mirror of its antiquity. Due to this, it is known to have an older history than Kittur and Belavadi kingdoms.

It would not be an exaggeration to say that its research could reveal a rich history in the near future.

-By Arya prince

=

ಕಿತ್ತೂರು ತಾಲೂಕಿನ ಖೋದಾನಪುರ ಗ್ರಾಮವು ಪ್ರಾಚೀನ ಇತಿಹಾಸ ಹೊಂದಿದ್ದು ವಿಜಯನಗರ ಸಾಮ್ರಾಜ್ಯದಂತೆ ಮುತ್ತು ರತ್ನ,ವಜ್ರ ವೈಡೂರ್ಯಗಳನ್ನು ಷೇರುಗಳಲ್ಲಿ ಅಳೆದು ಮಾರುವ ಶ್ರೀಮಂತ ಪ್ರದೇಶವಾಗಿತ್ತು,ಇವತ್ತಿಗೂ ಸಹ ಇಲ್ಲಿ ಬಂಗಾರದ ಮೂರ್ತಿಗಳು,ಆಭರಣಗಳು,ತಾಮ್ರ-ಬೆಳ್ಳಿ-ಬಂಗಾರದ ನಾಣ್ಯಗಳು ಬಹಳಷ್ಟು ಜನರಿಗೆ ದೊರೆಯುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.ಇದರ ಶ್ರೀಮಂತಿಕೆಯ ಕಾರಣದಿಂದಲೇ ಇದು ಅನ್ಯರ ದಾಳಿಗೆ ತುತ್ತಾಗಿ ನಾಶ ಹೊಂದಿತೆಂಬ ಇಲ್ಲಿಯ ಜನರ ಜನಪದದಂತಿರುವ ಕಥೆಯೂ ಕೂಡ ಇದಕ್ಕೆ ಸಾಕ್ಷಿ ಒದಗಿಸುತ್ತದೆ.ಇದು ಸುತ್ತ ಹತ್ತೂರಿಗೂ ಮಾರುಕಟ್ಟೆಯಾಗಿತ್ತು ಮತ್ತು ಇವತ್ತಿನ ಹೊಸ ಊರು ಕೂಡ ಇದಕ್ಕೆ ಹೊರತಾಗಿಲ್ಲ,ಈಗಿರುವ ಊರು ಹಳೆಯ ಊರಿನಿಂದ ಸ್ವಲ್ಪ ದೂರದಲ್ಲಿದ್ದು ಇಲ್ಲಿ ವಾಸಿಸುವ ಜನರಾರೂ ಮೂಲ ಊರಿನವರಲ್ಲ..ಹಾಳಾದ ಊರಿಗೆ ಬಹುವರ್ಷಗಳ ನಂತರ ವಲಸೆ ಬಂದು ನೆಲೆ ನಿಂತಂತಹ ಜನ ಮತ್ತು ಈಗಿರುವ ಊರು ಹಳೆಯ ಊರಿನವರ ಸಮಾಧಿ ಸ್ಥಳವಾಗಿದ್ದು ಈಗಿರುವ ಜನರ ಮೂಲ ತಲೆಮಾರಿಗೆ ಹಳೆಯ ಊರಿನ ಕುರುಹು ಅವರಿಲ್ಲಿ ನೆಲೆ ನಿಲ್ಲುವಾಗ ಗೊತ್ತಿಲ್ಲದಿರುವುದನ್ನು ತೋರಿಸಿ ಕೊಡುತ್ತದೆ..ಏಕೆಂದರೆ ಈ ಜನರಿಗೆ ಹಳೆಯ ಊರಿನ ಬಗ್ಗೆಯಾಗಲಿ ಅವರ ಸ್ಮಶಾನದ ಬಗ್ಗೆಯಾಗಲಿ ಗೊತ್ತಿದ್ದರೆ ಸಾಮಾನ್ಯವಾಗಿ ಅವರಿಲ್ಲಿ ನೆಲೆ ನಿಲ್ಲುತ್ತಿರಲಿಲ್ಲ,ಇದು ನೀರಾವರಿ ಹೊಂದಿಲ್ಲದ,ಆರ್ಥಿಕವಾಗಿ ಲಾಭದಾಯಕ ಭೂಮಿಯನ್ನು ಹೊಂದಿಲ್ಲದ ಊರು ಕೆಲವೇ ಮೂಲ ಜನರಿಂದ ಇವತ್ತಿಗೆ ಐದು ಸಾವಿರ ಜನಸಂಖ್ಯೆಯನ್ನು ಹೊಂದಲು ಬೇಕಾದ ಸಮಯಾವಕಾಶವನ್ನೂ ಮತ್ತು ಹಳೆಯ ಊರಿನ ಇತಿಹಾಸದ ಆಳವನ್ನೂ ತಿಳಿಯಲು ಸಹಾಯಕವಾಗಿದೆ. ಹಳೆಯ ಊರಿನಲ್ಲಿ ಕಟ್ಟಿದ ಮನೆಗಳು ಮಣ್ಣಿನ ಮನೆಗಳಾಗಿದ್ದರಿಂದ ಮತ್ತು ಕಟ್ಟಲು ಇಟ್ಟಿಗೆ ಉಪಯೋಗಿಸದೇ ಇದ್ದುದರಿಂದ ಪೂರ್ಣವಾಗಿ ನಾಶ ಹೊಂದಿವೆ..

ಇಲ್ಲಿಯ ಕಾವಲು ಗೋಪುರ,ಊರ ಸುತ್ತ ಕೋಟೆ ರೀತಿಯ ಕುರುಹುಗಳು ಕಂಡುಬರುತ್ತವೆ.ಇಲ್ಲಿ ದೊರಕುವ ನಾಣ್ಯಗಳು ಯಾವುದೇ ಭಾಷೆಯ ಲಿಪಿ ಮತ್ತು ಯಾವುದೇ ರಾಜನ ಆಡಳಿತದ ಕುರುಹುಗಳನ್ನು ಹೊಂದಿಲ್ಲದಿರುವುದು ಇದರ ಪ್ರಾಕ್ತನತೆಗೆ ಹಿಡಿದ ಕೈಗನ್ನಡಿಯಾಗಿದೆ.ಇದರಿಂದಾಗಿ ಇದು ಕಿತ್ತೂರು ಮತ್ತು ಬೆಳವಡಿ ಸಂಸ್ಥಾನಗಳಿಗಿಂತಲೂ ಹಳೆಯ ಇತಿಹಾಸ ಹೊಂದಿದ್ದು ತಿಳಿದು ಬರುತ್ತದೆ..

ಇದರ ಸಂಶೋಧನೆಯು ಮುಂದಿನ ದಿನಮಾನಗಳಲ್ಲಿ ನಡೆದರೆ ಒಂದು ಶ್ರೀಮಂತ ಇತಿಹಾಸದ ಅನಾವರಣವಾಗಬಹುದೆಂದು ಹೇಳುವುದು ಅತಿಶಯೋಕ್ತಿ ಎಂದೆನಿಸುವುದಿಲ್ಲ..

-By Arya prince

=

Notes and References

  1. http://censusindia.gov.in/Census_Data_2001/Village_Directory/List_of_Villages/List_of_Villages_Alphabetical.aspx?cki=&ComboState_Code=29 Village Directory